ಟ್ರಾನ್ಸ್‌ಲೇಷನ್ ಟುಡೆ
A Biannual Double-blind Peer-reviewed refereed UGC Approved Journal

ಟ್ರಾನ್ಸ್‌ಲೇಷನ್ ಟುಡೆ ಅನುವಾದ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವ ಎನ್‌ಟಿಎಮ್‌ನ ಅರ್ಧವಾರ್ಷಿಕ ನಿಯತಕಾಲಿಕೆ. ಇದೊಂದು ಉನ್ನತ ಮಟ್ಟದ ಅಂತರಾಷ್ಟ್ರೀಯ ನಿಯತಕಾಲಿಕೆಯಾಗಿದ್ದು ಅನುವಾದ ಅಧ್ಯಯನ ಮತ್ತು ಅದರ ತತ್ಸಂಬಂಧಿ ವಿಷಯಗಳ ಸಂಶೋಧನಾ ಪ್ರಬಂಧಗಳು, ನುರಿತ ವಿದ್ವಾಂಸರ ಮತ್ತು ಅನುವಾದಕರ ಸಂದರ್ಶನ, ವಿಮರ್ಶಾ ಲೇಖನ ಇತ್ಯಾದಿಗಳನ್ನು ಪ್ರಕಟಿಸುತ್ತದೆ. ಇದು ಆರಂಭಿಕ ಅನುವಾದಕರಿಗೆ ಶಿಕ್ಷಣವನ್ನು ಒದಗಿಸಿ ವಿದ್ವಾಂಸರ ನಡುವೆ ಪರಸ್ಪರ ಶೈಕ್ಷಣಿಕ ವಿಷಯಗಳನ್ನು ವಿನಿಮಯಮಾಡಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಇದು ಅನುವಾದಕರಿಗೆ ಇರುವ ಹೊಸಹೊಸ ಅವಕಾಶಗಳ ಕಡೆ ಗಮನ ಸೆಳೆಯುತ್ತದೆ ಮತ್ತು ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ಸಹಾಯಮಾಡುತ್ತದೆ.
 
The E-ZINE
ಭಾರತೀಯ ಭಾಷೆಗಳಿಗೆ ಮತ್ತು ಭಾರತೀಯ ಭಾಷೆಗಳಿಂದ ಆದ ಅನುವಾದಗಳ ಕುರಿತ ಪ್ರಬಂಧಗಳನ್ನು ಪ್ರಕಟಿಸುವುದರೊಂದಿಗೆ ಬೆಳೆಯುತ್ತಿರುವ ಅನುವಾದ ಅಧ್ಯಯನ ವಿಷಯಕ್ಕೆ ಕೊಡುಗೆ ನೀಡಲು ಮತ್ತು ಉತ್ಕೃಷ್ಟಗೊಳಿಸಲು ಟ್ರಾನ್ಸ್ಲೇಶನ್ ಟುಡೆ ಪ್ರಸ್ತಾಪಿಸುತ್ತದೆ.

ಟ್ರಾನ್ಸ್ಲೇಶನ್ ಟುಡೆ ಅನುವಾದ ಹಾಗೂ ಅನುವಾದಕರಿಗೆ ಸಂಬಂಧಿಸಿದ ಸಮಸ್ಯೆ ಮತ್ತು ವಿಶ್ಲೇಷಣಾತ್ಮಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಆದರೆ ಪರಿಹಾರವನ್ನು ಒದಗಿಸದ ಪೂರ್ಣ ಪ್ರಮಾಣದ ಲೇಖನ, ವಿಡಂಬನಾ ಲೇಖನ, ವಿಮರ್ಶಾ ಲೇಖನ, ಅನುವಾದ ಹಾಗೂ ಅನುವಾದ ಕುರಿತ ಪುಸ್ತಕಗಳ ಬಗ್ಗೆ ಲೇಖನ, ವಾಸ್ತವ ಅನುವಾದಗಳು ಅಲ್ಲದೆ ಸಂಪಾದಕರ ಪತ್ರ ಇತ್ಯಾದಿಗಳನ್ನು ಹೊಂದಿರುತ್ತದೆ. ಟ್ರಾನ್ಸ್ಲೇಶನ್ ಟುಡೆ ವೆಬ್ಸೈಟಿನಲ್ಲಿಯೂ ಲಭ್ಯವಿದ್ದು ಅದು ಅನುವಾದಕರು ಹಾಗೂ ಲೇಖಕರ ಸೂಚಿಯನ್ನು ಹೊಂದಿದೆ. ಮುಂದೆ ಇದು ಅನವಾದಕರ ಉದ್ಯೋಗ ಮಾರುಕಟ್ಟೆ, ಅನುವಾದ ತಂತ್ರಾಂಶಗಳ ಮಾರುಕಟ್ಟೆ ಮುಂತಾದ ಹೊಸ ವಿಭಾಗಗಳನ್ನು ಒಳಗೊಳ್ಳಬಹುದು. ಅನುವಾದಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಉದ್ಭವಿಸುವ ಸಮಸ್ಯೆ (ನಿರ್ದಿಷ್ಠವಾಗಿ ಭಾರತೀಯ ಭಾಷೆಗಳಿಂದ ಮತ್ತು ಭಾರತೀಯ ಭಾಷೆಗಳಿಗೆ ಅನುವಾದಿಸುವಾಗ ಉಂಟಾಗುವ ಸಮಸ್ಯೆ) ಹಾಗೂ ಗೊಂದಲಗಳಿಗೆ ಇಲ್ಲಿ ಹೆಚ್ಚಿನ ಗಮನ ನೀಡಲಾಗುತ್ತದೆ. ಆದಾಗ್ಯೂ ಈ ನಿಯತಕಾಲಿಕೆ ಕೇವಲ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಷ್ಟೇ ಸೀಮಿತವಲ್ಲ.

ಭಾರತಕ್ಕೆ ವ್ಯಾಕರಣ ಚಿಂತನೆ ಹೇಗೆ ಹೊಸತಲ್ಲವೋ ಹಾಗೆಯೇ ಅನುವಾದ ಚಿಂತನೆಯೂ ಭಾರತ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೂ ಇದು ಹೊಸತಲ್ಲ. ಈ ಹಲವು ಬಹುಭಾಷಾ ದೇಶಗಳು ಅನುವಾದಕರಿಗೆ ಸ್ವರ್ಗವಾಗಿವೆ.
  » ನಾವು ಅನುವಾದದಲ್ಲಿ ಬಿರುಸಿನ ಚಟುವಟಿಕೆಯನ್ನು ಬಯಸುತ್ತೇವೆ
  » ನಾವು ಅನುವಾದ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುತ್ತೇವೆ.
  » ನಾವು ಅನುವಾದಗೊಂಡ ಪದಗಳಲ್ಲಿ ಉತ್ಕೃಷ್ಟತೆಯನ್ನು ಬಯಸುತ್ತೇವೆ.