ಅನುವಾದದ ನಿಯೋಜನೆಗಳು

ಎನ್‌ಟಿಎಮ್ ದೇಶದಾದ್ಯಂತ ಇರುವ ಪ್ರಮುಖ ಪ್ರಕಾಶಕರ ಸಹಯೋಗದಲ್ಲಿ ಭಾರತೀಯ ಭಾಷೆಗಳಲ್ಲಿ ಅನುವಾದಗಳನ್ನು ಪ್ರಕಟಿಸುತ್ತದೆ. ಈ ಪ್ರಕಾಶಕರು ಎನ್‌ಟಿಎಮ್ ಅನುವಾದಕ್ಕಾಗಿ ಆಯ್ಕೆಮಾಡಿದ ಶೀರ್ಷಿಕೆಯ ಹಕ್ಕುಸ್ವಾಮ್ಯ ಪಡೆದವರಾಗಿರುತ್ತಾರೆ ಇಲ್ಲವೇ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುವವರಾಗಿರುತ್ತಾರೆ. ಅನುವಾದಿತ ಪಠ್ಯಗಳ ಮಾರಾಟ ಮತ್ತು ಹಂಚಿಕೆಗಾಗಿ ಎನ್‌ಟಿಎಮ್ ಈ ಪ್ರಕಾಶಕರೊಂದಿಗೆ ಕೆಲಸ ಮಾಡುತ್ತದೆ.

ಅನುವಾದಿತ ಪಠ್ಯಗಳನ್ನು ಹೊರತರಲು ಎನ್‌ಟಿಎಮ್ ಈ ಕೆಳಕೆಂಡ ಎರಡು ಪ್ರಾಯೋಗಿಕ ವಿಧಾನಗಳನ್ನು ಪಾಲಿಸುತ್ತದೆ:

  » ಒಂದು ಶೀರ್ಷಿಕೆಯ ಮೂಲ ಪ್ರಕಾಶಕರೇ ಯೋಜನೆಯನ್ನು ಕೈಗೆತ್ತಿಕೊಂಡು ಅನುವಾದವನ್ನು ಪ್ರಕಟಿಸುವುದು. ಈ ಪ್ರಕ್ರಿಯೆಯಲ್ಲಿ ಮುದ್ರಣ ವೆಚ್ಚದ ಒಂದು ಭಾಗವನ್ನು ಭರಿಸುವ ಮೂಲಕ ಅಥವಾ ಶೈಕ್ಷಣಿಕ ಸಲಹೆಯನ್ನು ನೀಡುವುದರ ಮೂಲಕ ಎನ್‌ಟಿಎಮ್ ಭಾಗಶಃ ಪಾಲ್ಗೊಳ್ಳುತ್ತದೆ.
  » ಒಂದು ವೇಳೆ ಮೂಲ ಪ್ರಕಾಶಕರು ಪಠ್ಯದ ಅನುವಾದ ಕಾರ್ಯದಲ್ಲಿ ಆಸಕ್ತಿ ತೋರದಿದ್ದಲ್ಲಿ ಎನ್‌ಟಿಎಮ್ ಅನುವಾದ ಕಾರ್ಯ, ಪ್ರಕಾಶನ ಮತ್ತು ಹಂಚಿಕೆಯನ್ನು ಭಾರತೀಯ ಭಾಷೆಗಳ ಪ್ರಕಾಶಕರಿಗೆ ಹೊರಗುತ್ತಿಗೆ ನೀಡುತ್ತದೆ. ಈ ವಿಧಾನದಲ್ಲಿ ಮೂಲ ಶೀರ್ಷಿಕೆಯ ಹಕ್ಕುಸ್ವಾಮ್ಯದಾರರು ಎನ್‌ಟಿಎಮ್ನಿಂದ ರಾಯಧನ ಪಡೆಯುತ್ತಾರೆ ಮತ್ತು ಅನುವಾದದ ಹಕ್ಕನ್ನು ಎನ್‌ಟಿಎಮ್ ಮಾತ್ರವೇ ಹೊಂದಿರುತ್ತದೆ. ಒಂದು ಪಕ್ಷ ಪ್ರಾದೇಶಿಕ ಪ್ರಕಾಶಕರು ಅನುವಾದ ಮಾಡಿಸದಿದ್ದರೆ ಎನ್‌ಟಿಎಮ್ ಅನುವಾದ ಮಾಡಿಸಿ ಕ್ಯಾಮರಾ ರೆಡಿ ಕಾಪಿಯನ್ನು ಸಿದ್ಧಪಡಿಸುತ್ತದೆ. ನಂತರ ಈ ಕ್ಯಾಮರಾ ರೆಡಿ ಕಾಪಿಯನ್ನು ಎನ್‌ಟಿಎಮ್ ಪ್ರಕಾಶಕರಿಗೆ ಕಳುಹಿಸುತ್ತದೆ ಮತ್ತು ಆ ಪ್ರಕಾಶಕರು ಅದನ್ನು ಮುದ್ರಿಸಿ ಹಂಚುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.

ಈ ಮೇಲ್ಕಂಡ ರೀತಿಯ ಅನುವಾದದ ನಿಯೋಜನೆಯನ್ನು ಟರ್ನ್‌ಕೀ ವಿಧಾನದವೆಂದು ಕರೆಯುತ್ತಾರೆ.