ಪದಕೋಶ

ಜ್ಞಾನಪಠ್ಯಗಳ ಅನುವಾದದಲ್ಲಿ ಪಾರಿಭಾಷಿಕ ಮತ್ತು ವೈಜ್ಞಾನಿಕ ಪರಿಭಾಷೆಯ ಅನುವಾದ ಮತ್ತು ಪ್ರಮಾಣೀಕರಣವು ಅತ್ಯಂತ ಅವಶ್ಯಕ. ಇದುವರೆಗೂ ಭಾರತೀಯ ಭಾಷೆಗಳಲ್ಲಿ ಪರಿಭಾಷೆ ಬಳಕೆಯಲ್ಲಿ ಯಾವುದೇ ಏಕರೂಪತೆ ಇಲ್ಲ. ಇತರ ಕೆಲವು ಭಾಷೆಗಳಾದ ತಮಿಳು ಮತ್ತು ಬಾಂಗ್ಲಾ ಭಾಷೆಗಳು ಒಂದಕ್ಕಿಂತ ಹೆಚ್ಚು ತಾಂತ್ರಿಕ ಪರಿಭಾಷೆಗಳನ್ನು ಹೊಂದಿವೆ, ಆದರೆ ಇತರ ಕೆಲವು ಭಾಷೆಗಳಿಗೆ ಪದಕೋಶಗಳೇ ಇಲ್ಲ. ಎನ್‌ಟಿಎಮ್, ಸೆಂಟರ್ ಫಾರ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಟರ್ಮಿನಾಲಜೀಸ್ (ಸಿಎಸ್ಟಿಟಿ) ಸಹಯೋಗದೊಂದಿಗೆ ಭಾರತೀಯ ಭಾಷೆಗಳ ವೈಜ್ಞಾನಿಕ ಪರಿಭಾಷೆಗಳ ಪ್ರಮಾಣೀಕರಣಕ್ಕಾಗಿ ಕೆಲಸ ಮಾಡುತ್ತಿದೆ. ಸೆಂಟರ್ ಫಾರ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಟರ್ಮಿನಾಲಜೀಸ್ (ಸಿಎಸ್ಟಿಟಿ)ನವರು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷೆಯನ್ನು 22 ಭಾಷೆಗಳಲ್ಲಿ ಆವಿಸ್ಕರಿಸಿ ವ್ಯಾಖ್ಯಾನಿಸಲು ರಾಷ್ಟ್ರೀಯ ಅನುವಾದ ಮಿಶನ್ನಿನ ಪ್ರಯತ್ನಗಳು ಬೆಂಬಲವನ್ನು ನೀಡುತ್ತವೆ. ಇದರಿಂದ ಜ್ಞಾನ ಪಠ್ಯಗಳನ್ನು ಶೀಘ್ರ ಮತ್ತು ಉತ್ತಮವಾಗಿ ಅನುವಾದಿಸಲು ಸಾಧ್ಯವಾಗುತ್ತದೆ.