|
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ನಾನು ಎನ್.ಟಿ.ಎಂ.ನಲ್ಲಿ ಹೇಗೆ ಭಾಗಿಯಾಗಬಹುದು? ನಾನು ಎನ್.ಟಿ.ಎಂ.ನಲ್ಲಿ
ಅನುವಾದಕ/ಅನುವಾದಕಿಯಾಗಿ ನನ್ನ ಹೆಸರನ್ನು ನೋಂದಾಯಿಸಬೇಕು. ನೋಂದಣಿಯನ್ನು ಹೇಗೆ ಮಾಡುವುದು? ನಾನು
ಪದವೀಧರ ವಿದ್ಯಾರ್ಥಿಯಾಗಿದ್ದು ಎನ್.ಟಿ.ಎಂ.ಗೆ ಸೇರಿಕೊಳ್ಳುವುದು ಹೇಗೆ ?
ಉತ್ತರ. ನಿಮ್ಮ ಸ್ವವಿವರವನ್ನು http://www.ntm.org.in/languages/english/login.aspx.
ಗೆ ಭೇಟಿ ನೀಡುವುದರ ಮೂಲಕ ಸಲ್ಲಿಸಬಹುದು. ಕೂಡಲೇ ನಮ್ಮಿಂದ ನೀವು ಪ್ರತ್ಯುತ್ತರ ಪಡೆಯುವಿರಿ ಎಂಬ
ಭರವಸೆ ನೀಡುವೆವು.
2. ನಾನು ಒಂದು ನಿರ್ದಿಷ್ಟ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಬೇಕೆಂದುಕೊಂಡಿದ್ದೇನೆ.
ಎನ್.ಟಿ.ಎಂ. ಅಡಿಯಲ್ಲಿ ಈ ಕೆಲಸವನ್ನು ಹೇಗೆ ಮಾಡಬಹುದು?
ಉತ್ತರ. ನೀವು ಮಾಡಿರುವ ಅನುವಾದದ ಮಾದರಿಯೊಂದಿಗೆ (ಸಾಂಪಲ್) ವಿಸ್ತೃತ ಯೋಜನಾ
ವರದಿಯನ್ನು ಸಲ್ಲಿಸಿ. ಅದನ್ನು ನಮ್ಮ ತಂಡ ಮೌಲ್ಯಮಾಪನ ಮಾಡಿ ತಜ್ಞ ಪ್ರತಿಕ್ರಿಯೆಗಳನ್ನು ನಿಮಗೆ ತಿಳಿಸುತ್ತದೆ.
3. ಎನ್.ಟಿ.ಎಂ.ನೊಂದಿಗೆ ಕೆಲಸ ಮಾಡಲು ಪೂರ್ವಾಪೇಕ್ಷಿತವಾದವು ಯಾವುವು?
ಉತ್ತರ. ಅನುವಾದಕರ ಅವಶ್ಯಕತೆಗಳಲ್ಲಿ ಎನ್.ಟಿ.ಎಂ. ಅನನ್ಯವಾಗಿದೆ. ಮೂಲ ಭಾಷೆ
ಮತ್ತು ಉದ್ದೇಶಿತ ಭಾಷೆಯಲ್ಲಿ ನಿಮ್ಮ ದಕ್ಷತೆ ಮತ್ತು ಗಡುವಿನಲ್ಲಿ ಕೆಲಸ ಪೂರೈಸುವ ಸಾಮರ್ಥ್ಯಕ್ಕಿಂತ
ಹೆಚ್ಚಿನದ್ದೇನನ್ನೂ ಎನ್.ಟಿ.ಎಂ. ನಿಮ್ಮಿಂದ ನಿರೀಕ್ಷಿಸುವುದಿಲ್ಲ. ವಯಸ್ಸು, ಅರ್ಹತೆ ಮತ್ತು ಸ್ಥಳ
ಎನ್.ಟಿ.ಎಂ.ನ ಭವಿಷ್ಯದ ಅನುವಾದಕರಿಗೆ ನಿರ್ಬಂಧವಾಗಿರುವುದಿಲ್ಲ.
4. ನಾನು ಎನ್.ಟಿ.ಎಂ.ನಿಂದ ದೂರದಲ್ಲಿದ್ದೇನೆ. ಆದರೂ ಎನ್.ಟಿ.ಎಂ.ನೊಂದಿಗೆ
ಕೆಲಸ ಮಾಡಬಹುದೇ?
ಉತ್ತರ. ಅನುವಾದ ಉದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಅನುವಾದದ ಬಗ್ಗೆ ಬಹಳ ಒಲವನ್ನು
ಹೊಂದಿರುವವರನ್ನು ಪ್ರೋತ್ಸಾಹಿಸಲು ಎನ್.ಟಿ.ಎಂ. ರಚಿಸಲಾಗಿದೆ. ಆದ್ದರಿಂದ ನೀವು ದೂರದಲ್ಲಿರುವುದು
ಸಮಸ್ಯೆಯಲ್ಲ. ನೀವು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಈ ಯೋಜನೆಯಲ್ಲಿ ಭಾಗಿಯಾಗಬಹುದು.
5. ಬಹುಮಾದ್ಯಮ ಅನುವಾದ ಎಂದರೇನು?
ಉತ್ತರ. ಲಿಖಿತ ಮತ್ತು ಮೌಖಿಕ ದಾಖಲೆಗಳು ಹೆಚ್ಚಾಗಿ ಅನುವಾದಗೊಂಡಿವೆ ಅಥವಾ ಅರ್ಥವಿವರಣೆಗೆ
ಒಳಗಾಗಿವೆ. ಬಹುಮಾಧ್ಯಮ ಅನುವಾದ ಈ ಎರಡು ಪದ್ಧತಿಯ ವ್ಯಾಪ್ತಿಯಡಿಯಲ್ಲಿ ಸ್ಪಷ್ಟವಾಗಿ ಬರುವುದಿಲ್ಲ.
ಉದಾಹರಣೆಗೆ, ನಿರೂಪಣೆ ಮತ್ತು ವಾಯ್ಸ್ಓವರ್ ಸೇವೆಗಳು, ಹಾಗೂ ಉಪಶೀರ್ಷಿಕೆ, ವೆಬ್ಸೈಟ್ ಅನುವಾದ ಮತ್ತು
ಬಹುಭಾಷಾ ಡೆಸ್ಕ್ಟಾಪ್ ಪಬ್ಲಿಷಿಂಗ್ ಒದಗಿಸುವಿಕೆ ಬಹುಮಾಧ್ಯಮ ಅನುವಾದದ ವ್ಯಾಪ್ತಿಯ ಅಡಿಯಲ್ಲಿ ಬರುತ್ತವೆ.
6. ವಾಯ್ಸ್ಓವರ್ ಮತ್ತು ನಿರೂಪಣೆ ನಿಮ್ಮ ಅನುವಾದ ಯೋಜನೆಗಳ ಒಂದು ಭಾಗವಾಗಿದೆಯೇ?
ಉತ್ತರ. ಸಿಐಐಎಲ್ ವ್ಯಾಪಕವಾಗಿ ವಾಯ್ಸ್ಓವರ್, ನಿರೂಪಣೆ ಹಾಗೂ ಇನ್ನೂ ಹೆಚ್ಚಿನದನ್ನು
ಒಳಗೊಂಡಿರುವ ಸಾಕ್ಷ್ಯಚಿತ್ರ ಮತ್ತು ಯೋಜನೆಗಳನ್ನು ನಿರ್ಮಿಸಿದೆ. ಈ ಪ್ರಕ್ರಿಯೆಗೆ ಅನುಕೂಲವಾಗುವಂತೆ
ಈ ಸಂಸ್ಥೆ ತನ್ನ ಆವರಣದಲ್ಲಿ ವೃತ್ತಿಪರ ಸ್ಟುಡಿಯೋವನ್ನು ಹೊಂದಿದೆ. ಆದ್ದರಿಂದ ಈ ನಿರ್ದಿಷ್ಟ
ಪರಿಕರಗಳ ಬೇಡಿಕೆಯಿರುವ ಯಾವುದೇ ಯೋಜನೆಯನ್ನು ಎನ್.ಟಿ.ಎಂ. ಖಂಡಿತವಾಗಿ ಬಳಸುತ್ತದೆ.
7. ನೀವು ಯಾವುದಾದರೂ ಅನುವಾದ ಪರಿಕರವನ್ನು ಬಳಸುವಿರಾ?
ಉತ್ತರ. ನಿಘಂಟಿನಂತಹ ಉತ್ತಮ ಗುಣಮಟ್ಟದ ಪರಿಕರಗಳಾದ ಅನುವಾದ ಮತ್ತು ಪದಜಾಲ ಇತ್ಯಾದಿಗಳಿಗೆ
ಬೇಕಾದ ತಂತ್ರಾಂಶವನ್ನು ಉತ್ಪಾದಿಸುವುದು ಎನ್.ಟಿ.ಎಂ.ನ ಉದ್ದೇಶಗಳಲ್ಲಿ ಒಂದು. ಎಲ್ಲರೂ ಈ ಪರಿಕರಗಳ
ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಲಾಗುವುದು.
8. ಒಂದು ಪಠ್ಯವನ್ನು ಅನುವಾದ ಮಾಡುವ ಸಮಯದಲ್ಲಿ ನಾನು ಯಾವ ಫಾರ್ಮ್ಯಾಟ್
ಅನುಸರಿಸಬೇಕು?
ಉತ್ತರ.
9. ಅನುವಾದದ ಶುಲ್ಕದ ಅಂದಾಜು ಪಟ್ಟಿಯನ್ನು ನಾನು ಹೇಗೆ ಪಡೆಯಬಹುದು?
ಉತ್ತರ.
10. ಆಯ್ದ ಅನುವಾದಕರಿಗೆ ಯಾವುದಾದರೂ ಕೋರ್ಸ್/ ಓರಿಯಂಟೇಶನ್ ಕಾರ್ಯಕ್ರಮ
ಇರುತ್ತದಾ?
ಉತ್ತರ. ಅನುವಾದ ಚಟುವಟಿಕೆಗೆ ವಿಶೇಷ ತರಬೇತಿಯ ಅಗತ್ಯವಿರುವುದರಿಂದ ಅನುವಾದಕರಿಗೆ
ಸೂಕ್ತ ಶಿಕ್ಷಣ ಒದಗಿಸುವುದು ಎನ್.ಟಿ.ಎಂ.ನ ಪ್ರಾಥಮಿಕ ಉದ್ದೇಶಗಳಲ್ಲಿ ಒಂದು. ಎನ್.ಟಿ.ಎಂ. ಅಲ್ಪಾವಧಿಯ
ತರಬೇತಿ ಕಾರ್ಯಕ್ರಮಗಳನ್ನು ಮಾಡುವುದು, ಅನುವಾದಕರಿಗೆ ಬೇಕಾದ ಕೋರ್ಸ್ ಮಾಡ್ಯೂಲ್ ಮತ್ತು ಪ್ಯಾಕೇಜ್ಗಳನ್ನು
ತಯಾರಿಸುವುದರ ಮೂಲಕ ಭವಿಷ್ಯದ ಅನುವಾದಕರಿಗೆ ಅನುಕೂಲಮಾಡಿಕೊಡುತ್ತದೆ. ಅಲ್ಲದೆ ಅನುವಾದ ತಂತ್ರಜ್ಞಾನದ
ವಿಶೇಷ ಕೋರ್ಸುಗಳ ಅಭಿವೃದ್ಧಿಗೆ ಪ್ರೋತ್ಸಾಹ, ಬೆಂಬಲ ಮತ್ತು ನೆರವನ್ನು ನೀಡುವುದು, ಸಂಶೋಧನಾ ಯೋಜನೆ,
ಫೆಲೋಶಿಪ್ ಕಾರ್ಯಕ್ರಮ ಮತ್ತು ಪರಿಶೀಲನೆ, ಸಂಪಾದನೆ ಮತ್ತು ಕಾಪಿ-ಎಡಿಟಿಂಗ್ ತರಹದ ಇನ್ನಷ್ಟು ಕಾರ್ಯಾಗಾರಗಳನ್ನು
ಆಯೋಜಿಸುವುದರ ಮೂಲಕ ಅನುವಾದಕರಿಗೆ ನೆರವಾಗಲು ಉತ್ತೇಜನ ನೀಡುವುದು.
11. ನಾನು ನನ್ನ ಆಯ್ಕೆಯ ಪುಸ್ತಕವನ್ನು ಅನುವಾದ ಮಾಡಬಹುದಾ? ಅಥವಾ ಎನ್.ಟಿ.ಎಂ. ನನಗೆ ಆಯ್ಕೆ ಮತ್ತು ಪುಸ್ತಕ ಎರಡನ್ನೂ ಒದಗಿಸುತ್ತದೆಯಾ?
ಉತ್ತರ. ಎನ್.ಟಿ.ಎಂ.ನ ಜ್ಞಾನ ಪಠ್ಯಗಳ ದತ್ತನಿಧಿ ಅನುವಾದ ಸಾಮಗ್ರಿಗಳಿಗೆ ಮೂಲವಾಗಿರುತ್ತದೆ.
|
|
|
|