ತಂತ್ರಾಂಶ

ಹೊಸ ತಂತ್ರಜ್ಞಾನಗಳು ಅನುವಾದ ಕ್ಷೇತ್ರದಲ್ಲಿ ಅತ್ಯಾಕರ್ಷಕ ಅವಕಾಶಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಸಂಪುಟಗಳನ್ನು ಶೀರ್ಘವಾಗಿ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಅನುವಾದವಾಗುವಂತೆ ಮಾಡಿವೆ. ಯಂತ್ರ ನೆರವಿನ ಅನುವಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸಂಸ್ಥೆಗಳು ತೊಡಗಿಸಿಕೊಂಡಿವೆ.

ಸಿ-ಡ್ಯಾಕ್, ಟಿಡಿಐಎಲ್, ಐಐಟಿ ಇತರೆ ಸಂಸ್ಥೆಗಳಿಗೆ ಸರ್ಕಾರ ಈಗಾಗಲೇ ಸಾಕಷ್ಟು ಹಣ ವೆಚ್ಚ ಮಾಡಿದೆ. ಈ ಪ್ರಯತ್ನಗಳನ್ನು ಎನ್‌ಟಿಎಮ್ ಪುನರಾವರ್ತಿಸುವುದಿಲ್ಲ. ಆದರೆ ಯಂತ್ರಾನುವಾದಕ್ಕೆ ತಾಂತ್ರಿಕ ಸಹಾಯ ಹಾಗೂ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ತರಬೇತಿ ಮತ್ತು ಹಲವು ಚಟುವಟಿಕೆಗಳನ್ನು ಒದಗಿಸಿ ಇತರೆ ಸಂಸ್ಥೆಗಳ ಮೂಲಕ ಸಹಕರಿಸುವುದು.

ಎನ್‌ಟಿಎಮ್ ಕೂಡ ಇನ್-ಲ್ಯಾನ್, ಇಂಗ್ಲೀಷ್ ಕನ್ನಡ ಯಂತ್ರಾನುವಾದ ಪ್ಯಾಕೇಜನ್ನು(ನಿಯಮಾಧಾರಿತ) ತಯಾರಿಸುತ್ತಿದೆ. ಕೊಡುವ ಇಂಗ್ಲೀಷ್ ವಾಕ್ಯಗಳನ್ನು ಯಂತ್ರ ಕನ್ನಡಕ್ಕೆ ತಾನೇ ಅನುವಾದ ಮಾಡುವುದು ಈ ಯಂತ್ರಾನುವಾದದ ಮುಖ್ಯ ಉದ್ದೇಶ.
  » ಅಗತ್ಯ ಮೂಲಸೌಕರ್ಯಗಳನ್ನು ಸೃಷ್ಟಿಸುವುದು, ಅದರಲ್ಲೂ ವಿಶೇಷವಾಗಿ ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿ ಅನುವಾದಕ್ಕಾಗಿ ತಕ್ಷಣದ ಬಳಕೆಗೆ ಬರುವ ಆನ್‌ಲೈನ್ ಪದಕೋಶಗಳಂತಹ ಡಿಜಿಟಲ್ ಉಪಕರಣ, ದ್ವಿಭಾಷಾ ನಿಘಂಟು, ಅನುವಾದದ ಸ್ಮರಣಾ ತಂತ್ರಾಂಶ ಇತ್ಯಾದಿಗಳನ್ನು ಸೃಷ್ಟಿಸುವುದು.
  » ಇ-ನಿಘಂಟುಗಳು, ಪದಜಾಲ, ಭಾಷಾ-ವಿಶ್ಲೇಷಣೆ ಮತ್ತು ಸಂಶ್ಲೇಷಣೆಯ ಉಪಕರಣ ಅನುಕ್ರಮಣಿಕೆ, ಆವರ್ತನ ವಿಶ್ಲೇಷಕಗಳು ಇತ್ಯಾದಿ ಪದಕೋಶೀಯ ಸಂಪನ್ಮೂಲಗಳು ಯಂತ್ರಾನುವಾದ ವ್ಯವಸ್ಥೆಯ ಅಗತ್ಯ ಅಂಶಗಳಾಗಿವೆ. ಇವುಗಳನ್ನು ಒಂದೇ ಸಂಸ್ಥೆಯು ಸೃಷ್ಟಿಸಿ ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅನೇಕ ಸಂಸ್ಥೆಗಳ ದೀರ್ಘಾವಧಿಯ ಸಹಭಾಗಿತ್ವದ ಅಗತ್ಯವಿದೆ. ಎನ್‌ಟಿಎಮ್, ಸಭೆ ಮತ್ತು ಆನ್‌ಲೈನ್ ಚರ್ಚೆಗಳ ಮೂಲಕ ನಿರಂತರ ಸಂವಾದ ನಡೆಸಿ ತಂಡದ ಕೆಲಸಕ್ಕೆ ವೇದಿಕೆಯನ್ನು ಒದಗಿಸಬಹುದು.
  » ಎನ್‌ಟಿಎಮ್ ಆಯ್ಕೆಮಾಡಿದ ಪಠ್ಯಗಳು ಮತ್ತು ಅವುಗಳ ಅನುವಾದಗಳು ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತಾಗಬೇಕು. ಈ ಡಿಜಿಟಲ್ ವಸ್ತುಗಳ ಗುಣಮಟ್ಟವನ್ನು ಎಕ್ಸ್ಎಮ್ಎಲ್ ಮತ್ತು ಡಿಟಿಡಿಗಳ ಮೂಲಕ ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ಎನ್‌ಟಿಎಮ್ ಖಾತ್ರಿಪಡಿಸಿಕೊಳ್ಳಬೇಕು.
  » ಟಿಪ್ಪಣಿ ಮತ್ತು ಜೋಡಣೆ ಹೊಂದಿರುವ ಉತ್ತಮ ಗುಣಮಟ್ಟದ ಸಮಾನಾಂತರ ಕಾರ್ಪೋರಾ ಅಭಿವೃದ್ಧಿಪಡಿಸುವುದು ಇತ್ತೀಚಿನ ಅಂತರರಾಷ್ಟ್ರೀಯ ಪ್ರವೃತ್ತಿ. ಇಂತಹ ಟಿಪ್ಪಣಿಗಳನ್ನು ಹೊಂದಿರುವ ಕಾರ್ಪೋರಾಗಳನ್ನು ಯಂತ್ರಾನುವಾದದ ವ್ಯವಸ್ಥೆಗಳ ಮೂಲಕ ಪಡೆಯುವ ಯಂತ್ರಕಲಿಕಾ ತಂತ್ರಗಳು ಎಂದು ಪರಿಗಣಿಸಲಾಗುತ್ತದೆ. ಈ ಡಾಟಾದ ಅಮೂಲಾಗ್ರ ಸಂಪುಟ ಮತ್ತು ಪೂರ್ಣ ಪ್ರಮಾಣದಲ್ಲಿ ವೈಯಕ್ತಿಕ ಸಂಸ್ಥೆಗಳು ಪರಿಪೂರ್ಣವಾಗಿ ಮಾಡದೇ ಇರುವಂತಹ ಗಣನೀಯ ಆರಂಭಿಕ ಹೂಡಿಕೆಗಳ ಅಗತ್ಯವಿದೆ; ಆದಾಗ್ಯೂ ಎನ್‌ಟಿಎಮ್ ಇಂತಹ ಪ್ರಯತ್ನಗಳಿಗೆ ಅನುಕೂಲ ಮಾಡಿಕೊಟ್ಟು ಬೆಂಬಲವನ್ನು ಒದಗಿಸಬಹುದು.