ನಿಘಂಟುಗಳು

ನಿಘಂಟು, ಪದಕೋಶ ಮತ್ತು ಉತ್ತಮ ಗುಣಮಟ್ಟದ ಅನುವಾದ ಪರಿಕರಗಳನ್ನು ತಯಾರಿಸುವುದು ಎನ್‌ಟಿಎಮ್‌ನ ಮುಖ್ಯ ಉದ್ದೇಶಗಳಲ್ಲಿ ಒಂದು. ದ್ವಿಭಾಷಾ ಮತ್ತು ಇ-ನಿಘಂಟುಗಳನ್ನು 22 ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ಬಳಸಿರುವ ಆಡುಭಾಷೆ, ಸಂದರ್ಭಕ್ಕೆ ತಕ್ಕ ಸರಳ ಭಾಷಾರಚನೆ, ಹೆಚ್ಚು ವ್ಯಾಪ್ತಿಯ ಉದಾಹರಣೆಗಳು, ಪದೇ ಪದೇ ಬಳಸುವ ಶಬ್ಧಕೋಶೀಯ ಮತ್ತು ಕ್ರಿಯಾತ್ಮಕ ಪದಗಳು ಮತ್ತು ಅವುಗಳ ಬಳಕೆ ಅನನ್ಯವಾದದ್ದು.

ವಿವಿಧ ಭಾರತೀಯ ಭಾಷೆಗಳಲ್ಲಿ ಎನ್‌ಟಿಎಮ್ ನಿಘಂಟುಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿದೆ. ಪ್ರಸ್ತುತ ಎರಡು ರೀತಿಯ ಪದಕೋಶೀಯ ನಿರ್ಮಾಣದ ಚಟುವಟಿಕೆಗಳನ್ನು ಕೈಗೊಂಡಿದೆ, ಅವುಗಳು:
   a)    ದ್ವಿಭಾಷಾ ಮೂಲ ನಿಘಂಟುಗಳು
   b)    ದ್ವಿಭಾಷಾ ಇ-ನಿಘಂಟುಗಳು

ದ್ವಿಭಾಷಾ ಮೂಲ ನಿಘಂಟುಗಳು
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರು ಮತ್ತು ಯುನೈಟೆಡ್ ಕಿಂಗ್ಡಮ್ ಮೂಲದ ಲಾಂಗ್ಮನ್ ಪಿಯರ್ಸನ್ ಗ್ರೂಪ್ ಸಹಯೋಗದೊಂದಿಗೆ 2006ರ ಮೇ-ಜೂನ್ ತಿಂಗಳಲ್ಲಿ ದ್ವಿಭಾಷಾ ನಿಘಂಟುಗಳನ್ನು ತಯಾರಿಸುವ ಜಂಟಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಎನ್‌ಟಿಎಮ್‌ನ ಉಗಮದಿಂದ ಈ ನಿಘಂಟುಗಳನ್ನು ಅನುವಾದದ ಪರಿಕರಗಳಾಗಿ ಬಳಸಲು ನಿರ್ಧರಿಸಿ ಈ ಯೋಜನೆಯನ್ನು 2008ರಲ್ಲಿ ಎನ್‌ಟಿಎಮ್‌ ಜೊತೆ ಸೇರಿಸಲಾಯಿತು. ಈ ದ್ವಿಭಾಷಾ ನಿಘಂಟುಗಳು ಬ್ರಿಟಿಷ್ ನ್ಯಾಷನಲ್ ಕಾರ್ಪಸ್ (ಬಿಎನ್ಸಿ) ಆಧಾರಿತ ಅತ್ಯಂತ ಜನಪ್ರಿಯ ಮೂಲ ಇಂಗ್ಲೀಷ್-ಇಂಗ್ಲೀಷ್ ನಿಘಂಟಿನಲ್ಲಿ 14,000ಕ್ಕೂ ಹೆಚ್ಚು ಬಳಕೆಯಲ್ಲಿರುವ ಪದ ಮತ್ತು ಪದಗುಚ್ಛಗಳನ್ನು ಒಳಗೊಂಡಿದೆ.

ಲಾಂಗ್ಮನ್-ಎನ್‌ಟಿಎಮ್–ಸಿಐಐಎಲ್ ಮೂಲ ದ್ವಿಭಾಷಾ ನಿಘಂಟುಗಳನ್ನು ಹಂತ ಹಂತಗಳಲ್ಲಿ ಹೊರತರಲು ನಿರ್ಧರಿಸಲಾಗಿದ್ದು ಬಂಗಾಳಿ, ಹಿಂದಿ, ಕನ್ನಡ, ಮಲಯಾಳಂ, ಒರಿಯಾ ಮತ್ತು ತಮಿಳು ನಿಘಂಟುಗಳು ಈಗಾಗಲೇ (ಪಟ್ಟಿಯನ್ನು ಕೆಳಗೆ ನೀಡಲಾಗಿದೆ) ಪ್ರಕಟವಾಗಿವೆ. ಪಂಜಾಬಿ, ಗುಜರಾತಿ, ಮರಾಠಿ, ತೆಲುಗು ಮತ್ತು ಉರ್ದು ನಿಘಂಟುಗಳನ್ನೂ ಕೂಡ ಶೀಘ್ರದಲ್ಲೇ ಹೊರತರಲಾಗುವುದು.
 
2011-2012ರಲ್ಲಿ ಪಿಯರ್ಸನ್ ಎಜುಕೇಷನ್ (ಭಾರತ) ಪ್ರಕಟಿಸಿದ ನಿಘಂಟುಗಳ ಪಟ್ಟಿ:

  1. ಲಾಂಗ್ಮನ್-ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ಹಿಂದಿ ನಿಘಂಟು
  2. ಲಾಂಗ್ಮನ್-ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ಬಂಗಾಳಿ ನಿಘಂಟು
  3. ಲಾಂಗ್ಮನ್-ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ಕನ್ನಡ ನಿಘಂಟು
  4. ಲಾಂಗ್ಮನ್-ಎನ್‌ಟಿಎಮ್–ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ಒರಿಯಾ ನಿಘಂಟು
  5. ಲಾಂಗ್ಮನ್-ಎನ್‌ಟಿಎಮ್–ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ಮಲಯಾಳಂ ನಿಘಂಟು
  6. ಲಾಂಗ್ಮನ್-ಎನ್‌ಟಿಎಮ್–ಸಿಐಐಎಲ್ ಇಂಗ್ಲೀಷ್ ಇಂಗ್ಲೀಷ್ ತಮಿಳು ನಿಘಂಟು

ಪದಕೋಶ ನಿರ್ಮಾಣದ ಚಟುವಟಿಕೆಯನ್ನು ವಿಸ್ತರಿಸುವ ಹಾಗೂ ಭಾರತೀಯ ಸಂವಿಧಾನದ 8ನೇ ಅನುಚ್ಛೇದದಲ್ಲಿ ಪಟ್ಟಿಮಾಡಲಾಗಿರುವ ಎಲ್ಲಾ 22 ಭಾಷೆಗಳಲ್ಲಿ ನಿಘಂಟುಗಳನ್ನು ಹೊರತರುವ ಕಾರ್ಯದಲ್ಲಿ ಎನ್‌ಟಿಎಮ್ ತೊಡಗಿದೆ.

ದ್ವಿಭಾಷಾ ಇ- ನಿಘಂಟುಗಳು

ಎನ್‌ಟಿಎಮ್–ಸಿಐಐಎಲ್ ಡಾರ್ಲಿಂಗ್ ಕಿಂಡರ್ಸ್ಲೆ (ಭಾರತ) ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವರ ಸಲಹಾ ಸೇವೆಗಳನ್ನು ಮತ್ತು 'ಲಾಂಗ್ಮನ್ ಅಡ್ವಾನ್ಸ್ಡ್ ಬೈಲಿಂಗ್ವಲ್ ಫ್ರೇಮ್ವರ್ಕ್' (ಎಲ್ಎಬಿಎಫ್) ಪಿಯರ್ಸನ್ ಎಜುಕೇಶನ್ನಿನ ಎಕ್ಸ್ಎಮ್ಎಲ್ ಡಾಟಾಸೆಟ್ಟನ್ನು ಉಪಯೋಗಿಸಲು ಪರವಾನಗಿ ಪಡೆದಿದೆ. ಎಲ್ಎಬಿಎಫ್ ಡಾಟಾಸೆಟ್ಟನ್ನು ಎ-ಯಿಂದ-ಜಡ್ ಅಕ್ಷರಗಳನ್ನು ಎನ್‌ಟಿಎಮ್ಗಾಗಿ ಐಡಿಎಮ್ ಸರ್ವರ್ಗೆ ಲಾಂಗ್ಮನ್ ಯುಕೆ ಅಪ್ಲೋಡ್ ಮಾಡಿದೆ. ಎಲ್ಎಬಿಎಫ್ ಡಾಟಾಸೆಟ್ಟನ್ನು ಡಿಕ್ಷ್ನರಿ ಪ್ರೊಡಕ್ಷನ್ ಸಿಸ್ಟಮ್ (ಡಿಪಿಎಸ್) ಮೂಲಕ ಬಳಸಲಾಗುವುದು. ಮೂಲತಹ ಇದನ್ನು ಲಾಂಗ್ಮನ್ ಅಭಿವೃದ್ದಿಪಡಿಸಿದ್ದು ಫ್ರಾನ್ಸಿನ ಐಡಿಎಮ್ ಮಾರಾಟ ಮಾಡುತ್ತದೆ. ಎನ್‌ಟಿಎಮ್ ದ್ವಿಭಾಷಾ ಎಲೆಕ್ಟ್ರಾನಿಕ್ ನಿಘಂಟುಗಳು ಈ ಕೆಳಗಿನವುಗಳನ್ನು ಆಧರಿಸಿವೆ-

  » ಲಾಂಗ್ಮನ್ ಡಿಕ್ಷ್ನರಿ ಆಫ್ ಕಾಂಟೆಂಪರರಿ ಇಂಗ್ಲಿಶ್
  » ಲಾಂಗ್ಮನ್ ಅಡ್ವಾನ್ಸ್ಡ್ ಅಮೆರಿಕನ್ ಡಿಕ್ಷನರಿ
  » ಲಾಂಗ್ಮನ್ ಡಿಕ್ಷ್ನರಿ ಆಫ್ ಇಂಗ್ಲಿಶ್ ಅಂಡ್ ಕಲ್ಚರ್
  » ಲಾಂಗ್ಮನ್ ಬಿಸಿನೆಸ್ ಡಿಕ್ಷ್ನರಿ
  » ಲಾಂಗ್ಮನ್ ಡಿಕ್ಷ್ನರಿ ಆಫ್ ಇಂಗ್ಲಿಶ್ ಲ್ಯಾಂಗ್ವೇಜ್
  » ಲಾಂಗ್ಮನ್ ಕಾರ್ಪಸ್ ನೆಟ್ವರ್ಕ್ನಿಂದ ಮಾಹಿತಿ

ನಿಘಂಟುಗಳಿಗೆ ಸಂಬಂಧಿಸಿದಂತೆ ಅಂತಿಮಗೊಳಿಸಬೇಕಾದ ಬೇರೆ ಬೇರೆ ಮೂಲಭೂತ ವಿಚಾರಗಳ ಬಗ್ಗೆ ಪಿಯರ್ಸನ್ ಎಜುಕೇಷನ್ ಜೊತೆ ಎನ್‌ಟಿಎಮ್ ಸಂಪರ್ಕದಲ್ಲಿದೆ.