ಗುರಿ ಮತ್ತು ಉದ್ದೇಶಗಳು

ಮಿಶನ್ನಿನ ಅಲ್ಪಾವದಿ ಗುರಿಗಳೆಂದರೆ
  » ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿರುವ ಪ್ರಮುಖ ವಿಷಯಗಳ ಜ್ಞಾನಪಠ್ಯಗಳ ಅನುವಾದವನ್ನು ಪ್ರಕಟಿಸುವುದು ಮತ್ತು ಪ್ರೋತ್ಸಾಹಿಸುವುದು.
  » ಭಾರತೀಯ ವಿಶ್ವವಿದ್ಯಾಲಯಗಳ ದತ್ತನಿಧಿ, ಅನುವಾದಕರ ರಾಷ್ಟ್ರೀಯ ನೋಂದಣಿ, ಪ್ರಕಾಶಕರ ದತ್ತನಿಧಿ, ಬೋಧಕ ಮತ್ತು ತಜ್ಞರ ದತ್ತನಿಧಿ ಹಾಗೂ ನಿಘಂಟು ಮತ್ತು ಪದಕೋಶಗಳ ದತ್ತನಿಧಿ-ಈ ಐದು ದತ್ತನಿಧಿಗಳನ್ನು ರೂಪಿಸಿ ನಿರ್ವಹಿಸಿವುದು.
  » ಇಂಗ್ಲಿಶ್ ಮತ್ತು ಭಾರತೀಯ ಭಾಷೆಗಳ ನಡುವೆ ಯಂತ್ರಾಧಾರಿತ ಅನುವಾದವನ್ನು ಪ್ರೋತ್ಸಾಹಿಸುವುದು.
  » ವಿವಿಧ ಕ್ಷೇತ್ರಗಳ ಅನುವಾದಕರ ತರಬೇತಿ ಮತ್ತು ಪ್ರಮಾಣೀಕರಣ.
  » ಅನುವಾದಕರ ಶಿಕ್ಷಣ ಕಾರ್ಯಕ್ರಮದಡಿ ಅಲ್ಪಾವಧಿ ತರಬೇತಿ ಕೋರ್ಸುಗಳನ್ನು ನಡೆಸುವುದು.
  » ನಿಘಂಟು ಮತ್ತು ತೆಸಾರಸ್ಗಳಂತಹ ಅನುವಾದ ಪರಿಕರಗಳನ್ನು ಅಭಿವೃದ್ಧಿಪಡಿಸುವುದು.
  » ಸೆಂಟರ್ ಫಾರ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಟರ್ಮಿನಾಲಜೀಸ್(ಸಿಎಸ್ಟಿಟಿ) ಸಹಯೋಗದೊಂದಿಗೆ ವೈಜ್ಞಾನಿಕ ಹಾಗೂ ಪಾರಿಭಾಷಿಕ ಪದಗಳನ್ನು ಭಾರತೀಯ ಭಾಷೆಗಳಲ್ಲಿ ಸಿದ್ಧಪಡಿಸುವುದು.

ಮಿಶನ್ನಿನ ದೀರ್ಘಕಾಲದ ಉದ್ದೇಶಗಳು
  » ಅನುವಾದ ಸ್ಮರಣೆ, ಪದಪತ್ತೆ, ಪದಜಾಲ ಇತ್ಯಾದಿ ತಂತ್ರಾಂಶ ಕುರಿತ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡುವುದು.
  » ನೈಸರ್ಗಿಕ ಭಾಷಾ ಪ್ರಕ್ರಿಯೆ ಮತ್ತು ಅನುವಾದ ಸಂಬಂಧಿತ ಸಂಶೋಧನಾ ಯೋಜನೆಗಳಿಗೆ ಅನುದಾನ ಮತ್ತು ವಿದ್ಯಾರ್ಥಿವೇತನ ಒದಗಿಸುವುದು.
  » ಅನುವಾದದಲ್ಲಿ ಪದವಿ/ಡಿಪ್ಲೊಮಾ ಕೋರ್ಸ್ ನಡೆಸುವ, ಎರಡು ಭಾಷೆಗಳ ನಡುವಿನ ಅನುವಾದಕ್ಕೆ ಪೂರಕವಾದ ಕೈಪಿಡಿಗಳನ್ನು ತಯಾರಿಸುವಂತಹ ನಿರ್ದಿಷ್ಟ ಯೋಜನೆಗಳಿಗೆಗಾಗಿ ವಿಶ್ವವಿದ್ಯಾನಿಲಯ/ವಿಭಾಗಗಳಿಗೆ ಅನುದಾನ ನೀಡುವುದು.
  » ಅನುವಾದ ಕುರಿತ ನಿಯತಕಾಲಿಕೆ ಅಥವಾ ಅನುವಾದ ಸಂಬಂಧಿ ಪಠ್ಯ ಮತ್ತು ವಿಶ್ಲೇಷಣೆ ಇತ್ಯಾದಿಗಳನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲು ಬೆಂಬಲಿಸುವುದು.
  » ಅನುವಾದಿತ ಪಠ್ಯಗಳ ಬಿಡುಗಡೆ, ಪ್ರಾದೇಶಿಕ ಅನುವಾದ ಉತ್ಸವ, ಚರ್ಚೆ, ಪುಸ್ತಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅನುವಾದಕರು ಮತ್ತು ಅನುವಾದ ಚಟುವಟಿಕೆಗಳು ಎಲ್ಲೆಡೆ ಗೋಚರಿಸುವಂತೆ ಮಾಡುವುದು.
  » ಅನುವಾದ ಅಧ್ಯಯನಕ್ಕೆ ಸಂಬಂಧಿಸಿದ ಗಂಭೀರ ಶೈಕ್ಷಣಿಕ ಕೃತಿಗಳನ್ನು ಶೇಖರಿಸಿವುದು ಮತ್ತು ಇದರ ಮೂಲಕ ಅನುವಾದಕ್ಕೆ ಸಂಬಂಧಪಟ್ಟ ಸಂವಾದಗಳನ್ನು ಏರ್ಪಡಿಸುವುದು.
  » ಅನುವಾದವನ್ನು ಒಂದು ಸಮರ್ಥ ವೃತ್ತಿಯನ್ನಾಗಿ ಸ್ಥಾಪಿಸುವುದು ಮತ್ತು ಉದ್ಯಮವನ್ನಾಗಿ ಬೆಳೆಸುವುದು.

ಫಲಾನುಭವಿಗಳು
ಎನ್ಟಿಎಮ್ ಒಂದು ಅಂತರ್ಗತ ಜ್ಞಾನಸಮಾಜವನ್ನು ರಚಿಸುವ ಗುರಿ ಹೊಂದಿದೆ. ಮೂಲಭೂತ ಪಠ್ಯಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಳಿಸುವ ಮೂಲಕ ಮಿಶನ್ ಜ್ಞಾನದ ಸಮಾನ ವಿತರಣೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಇದು ಭಾಷಾ ತೊಡಕಿನಿಂದ ಜ್ಞಾನಾರ್ಜನೆಯ ಸಮಸ್ಯೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಹಾಗೆಯೇ ಎನ್ಟಿಎಮ್ ವಿವಿಧ ಹಂತಗಳಲ್ಲಿರುವ ದೊಡ್ಡ ಪ್ರಮಾಣದ ಜನರಿಗೆ ಪ್ರಯೋಜನ ನೀಡುವ ಗುರಿ ಹೊಂದಿದೆ.
  » ವಿವಿಧ ಮಟ್ಟಗಳಲ್ಲಿ ಬೇರೆ ಬೇರೆ ಕೌಶಲ್ಯ ಹೊಂದಿರುವ ಬೋಧಕರು
  » ಲೇಖಕರು/ಅನುವಾದಕರು/ಪ್ರಕಾಶಕರು
  » ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳ ಸಂಶೋಧಕರು, ಅನುವಾದ ಅಧ್ಯಯನ ಮತ್ತು ಭಾಷಾವಿಜ್ಞಾನ ವಿಭಾಗಗಳು.
  » ಹೊಸ ಮತ್ತು ಆಸಕ್ತಿದಾಯಕ ಉದ್ಯಮಗಳನ್ನು ಹುಡುಕುತ್ತಿರುವ ಭಾರತೀಯ ಭಾಷೆಗಳ ಪ್ರಕಾಶಕರು
  » ಅನುವಾದ ತಂತ್ರಾಂಶ ಅಭಿವೃದ್ಧಿಪಡಿಸುವವರು.
  » ತುಲನಾತ್ಮಕ ಸಾಹಿತ್ಯದ ವಿದ್ವಾಂಸರು.
  » ತಮ್ಮದೇ ಭಾಷೆಗಳಲ್ಲಿ ಸಾಹಿತ್ಯ ಮತ್ತು ಜ್ಞಾನಪಠ್ಯಗಳನ್ನು ಎದುರು ನೋಡುತ್ತಿರುವ ಓದುಗರು.
  » ಅನೌಪಚಾರಿಕ ಶಿಕ್ಷಣ ಒದಗಿಸಲು ತೊಡಗಿಸಿಕೊಂಡಿರುವ ಸ್ವಯಂಸೇವಕರು
  » ಸಾರ್ವಜನಿಕ ಆರೋಗ್ಯ, ನಾಗರಿಕ ಹಕ್ಕುಗಳು, ಪರಿಸರ, ಜನಪ್ರಿಯ ವಿಜ್ಞಾನ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿರುವ ಎನ್.ಜಿ.ಓ.ಗಳು
  » ವ್ಯಾಖ್ಯಾನಕಾರರಿಗಾಗಿ ಹುಡುಕುತ್ತಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು.
  » ಉಪಶೀರ್ಷಿಕೆಗಳು ಮತ್ತು ಬಹುಭಾಷಾ ಚಲನಚಿತ್ರ ಬಿಡುಗಡೆಗಳಿಗಾಗಿ ಎದುರು ನೋಡುತ್ತಿರುವ ನಿರ್ಮಾಪಕರು
  » ವಿವಿಧ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರಮಾಡುವ ಎಫ್ಎಮ್ ಮತ್ತು ಇತರೆ ರೇಡಿಯೋ ಕೇಂದ್ರಗಳು