ಸಂಪಾದಕೀಯ ಸಲಹಾ ತಂಡ

ಪ್ರತಿಯೊಂದು ಭಾಷೆಗೂ ಸಂಬಂಧಿಸಿದಂತೆ ಎಂಟರಿಂದ ಹತ್ತು ಸದಸ್ಯರ ಸಂಪಾದಕೀಯ ಸಲಹಾ ತಂಡಗಳನ್ನು ರಚಿಸಲಾಗಿದೆ. ಈ ತಂಡದ ಸದಸ್ಯರು ಅನುವಾದಕ್ಕೆಂದು ಆಯ್ದು ಪಟ್ಟಿಮಾಡಿದ ಶೀರ್ಷಿಕೆಗಳ ಅನುವಾದ ಮತ್ತು ಅದರ ಪ್ರಕಟಣೆಯ ಕಾರ್ಯವಿಧಾನಗಳನ್ನು ಪರೀಕ್ಷಿಸಿ ಅದರ ಸುಧಾರಣೆಗೆ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಸದಸ್ಯರು ಆವಶ್ಯಕತೆಯಿದ್ದಾಗ ಈ ಕೆಳಕೆಂಡ ಸಂದರ್ಭಗಳಲ್ಲಿ ಸಭೆ ಸೇರಿ...

  » ಅನುವಾದಕರು, ವಿಷಯ ತಜ್ಞರು ಮತ್ತು ಪ್ರಕಾಶಕರನ್ನು ಗುರುತಿಸಲು ಅಥವಾ ಪರಿಚಯಿಸಲು ಸಹಾಯ ಮಾಡುತ್ತಾರೆ
  » ಅನುವಾದಕರಿಗೆ ಪಾರಿಭಾಷಿಕ ಪದಗಳು ಮತ್ತು ಪರಿಕಲ್ಪನಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡುತ್ತಾರೆ
  » ಎನ್‌ಟಿಎಮ್ ಮತ್ತು ಪ್ರಕಾಶಕರ ನಡುವೆ ಸಂಬಂಧ ಕಲ್ಪಿಸುತ್ತಾರೆ
  » ಅನುವಾದಿತ ಪಠ್ಯದ ಪರಿಶೀಲನೆಯಲ್ಲಿ ಮಾರ್ಗದರ್ಶನ ನೀಡುತ್ತಾರೆ