|  | 
                 
         
         | 
        ಅನುಚ್ಛೇದ - III
                         
    
        
            
                |   |  
            
                | ರಾಷ್ಟ್ರೀಯ ಅನುವಾದ ಮಿಷನ್ ನ ಸ್ವರೂಪ |  
                | NTM ಅದರ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಸಂಬಂಧಿತವಾಗಿ ಒಂದು ಚಿಕ್ಕ ಅಂಗ ಹಾಗೂ ಸಂಸ್ಥೆಯಲ್ಲಿ ನಮ್ಯವಾದದ್ದು.
                    ಆದರೆ, ಇದು ಗುರುತಿಸಲ್ಪಟ್ಟ/ಸೂಚಿತ ಕ್ಷೇತ್ರಗಳಲ್ಲಿ ಉದ್ದೇಶಿತ ಸಹಾಯಧನ ಕೈಗೊಳ್ಳಲು ಬೇಕಾಗುವಷ್ಟು
                    ಆಯವ್ಯಯ ಇರುತ್ತದೆ. ಅದು ಡೈರೆಕ್ಟರ್ ಜನರಲ್, ಹಾಗೂ 15-20 ಪೂರ್ಣಕಾಲಿಕ ಶೈಕ್ಷಣಿಕ ಸಿಬ್ಬಂದಿ ಹಾಗೂ
                    ಸಮ ಪ್ರಮಾಣದ ಬೆಂಬಲಿತ ಸಿಬ್ಬಂದಿ (ಲೆಕ್ಕಾಚಾರ/ಆಡಿಟ್, ಗ್ರಂಥಲಯ ಮತ್ತು ಮಾಹಿತಿ, ಜಾಲ ವಿನ್ಯಾಸ,
                    ಹಾಗೂ ಮುದ್ರಣ ತಜ್ಞರು, ಸಹಾಯ ಸಂಪಾದಕರು, ಕಾರ್ಯ ಸಂಯೋಜನಾ ಸಹಾಯಕರು, ತಂತ್ರಜ್ಞರು, ದಾಖಲೆ ಸಂಗ್ರಹಣ
                    ಮುಂತಾದವರನ್ನು ಒಳಗೊಂಡಿರುತ್ತದೆ. NTMನ ಕಾರ್ಯ ಚಟುವಟಿಕೆಗಳನ್ನು ಮಾರ್ಗದರ್ಶಿಸಲು ಒಂದು ಸಲಹಾ ಸಮಿತಿಯನ್ನು
                    ಹೊಂದಿರುತ್ತದೆ ತೀರ್ಪು ತೆಗೆದುಕೊಳ್ಳುವ ಅಂಗದಲ್ಲಿ 10 ಜನ ಸದಸ್ಯರು ಇದ್ದು ಅಂದರೆ ಅನುವಾದ, ಶೈಕ್ಷಣಿಕ,
                    ಪ್ರಕಟಕರನ್ನು ಪ್ರತಿನಿಧಿಸುವವರಾಗಿರುತ್ತಾರೆ ಅಲ್ಲದೆ ಅವರು ಕ್ರಮವರ್ತನ ಸದಸ್ಯತ್ವ (ಉದಾಹರಣಿಗೆ:
                    ಎರಡು ಅಥವಾ ಮೂರು ವರ್ಷದ ಅವಧಿ ಹಾಗೂ ಪ್ರತಿ ವರ್ಷ ಎರಡು ಸದಸ್ಯರ replace) ವನ್ನು ಹೊಂದಿರುತ್ತಾರೆ. 
 ಮಾಹಿತಿ, ಉಪಯೋಗ, ತರಬೇತಿ ಹಾಗು ಅನುವಾದ ಕ್ಷೇತ್ರದಲ್ಲಿ ಸೃಜನಶೀಲತೆ, ಈ ಮುಂತಾದವುಗಳ ಮೇಲೆ NTM
                    ಕೇಂದ್ರಿಕೃತವಾಗಿದೆ. ಅದು ಕೇಂದ್ರೀಕೃತ ರೀತಿಯಲ್ಲಿ ಕಾರ್ಯ ನಿರ್ವಹಿಸದೆ, ಹಲವಾರು ಬೇರೆ ಬೇರೆ ಘಟ್ಟಗಳಲ್ಲಿ
                    ಅಂದರೆ ರಾಜ್ಯ ಹಾಗು ಪ್ರಾಂತೀಯ ಘಟ್ಟಗಳು ಮತ್ತು ಹಲವಾರು ಇತರ ಸಂಸ್ಧೆಗಳ ಸಂಯೋಜನೆಯನ್ನು ಬಯಸುತ್ತದೆ.
 
 ಇದು ಹಲವಾರು ಸಂಘ, ಸಂಸ್ಧೆಗಳೊಂದಿಗೆ ಸಂಯೋಜಿಸಿ ಮತ್ತು ಸಹಕರಿಸಿ ನಕಲಾಗದಂತೆ ತಡೆದು, ಸಮಷ್ಟಿ ಪರಿಣಾಮವನ್ನು
                    ಸೃಷ್ಟಿಸಿ, ಅನುವಾದ ಚಟುವಟಿಕೆಯ ಸಮಗ್ರ ಅಲ್ಲದೆ ನಮ್ಯ ಅಭಿವೃದ್ದಿಗೆ ಅನುವು ಮಾಡಿಕೊಡುತ್ತದೆ. ಇದು
                    ರಾಷ್ಟೀಯ ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಸಾಹಿತ್ಯ ಅಕಾಡೆಮಿ, ಅನುವಾದ ಕೇಂದ್ರಗಳು,
                    ಭಾರತೀಯ ಭಾಷಾ ಸಂಸ್ಧಾನ, ಅನುವಾದದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳನ್ನು ನೀಡುತ್ತಿರುವ
                    ವಿಶ್ವವಿದ್ಯಾನಿಲಯ ವಿಭಾಗಗಳು, ಗ್ರಂಥ್ ಅಕಾಡಮೀಸ್, ಇತರ ರಾಜ್ಯ ಮಟ್ಟದ ಸಂಸ್ಧೆಗಳು, ಸಾರ್ವಜನಿಕ
                    ಗಂಥ್ರಾಲಯ ಜಾಲಗಳು ಮುಂತಾದವುಗಳನ್ನು ಒಳಗೊಂಡಿದೆ. ಅಲ್ಲದೆ ಇದು ಪ್ರಕಾಶಕರು, ವೃತಪತ್ರಿಕೆ ಮತ್ತು
                    ಇತರ ಮಾಧ್ಯಮ, ಸಂಯುಕ್ತ ಸಂಸ್ಧೆಗಳು, ಪುಸ್ತಕ ಮಾರಾಟಗಾರರನ್ನು ಕೂಡ ಒಳಗೊಂಡಿದೆ. ಇದರೊಟ್ಟಿಗೆ NTM,
                    ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಪ್ರೌಢ (ಕಲಿಕ) ಓದುಗರು ಮತ್ತು ಇತರ ಪ್ರಜೆಗಳ ಅಗತ್ಯಗಳೊಂದಿಗೆ
                    ಸಂವಹಿತಬೇಕಾಗುತ್ತದೆ ಮತ್ತು ಸಂಯೋಜಿಸಬೇಕಾಗುತ್ತದೆ. ಇದರ ಮುಖ್ಯ ಉದ್ದೇಶವೇನೆಂದರೆ, ಈಗಿರುವ ಸಾರ್ವಜನಿಕ
                    ಮತ್ತು ಖಾಸಗಿ ಸಂಸ್ಧೆಗಳ ಕರ್ತೃಗಳಲ್ಲಿ ಸಹಕ್ರಿಯೆಗಳನ್ನು ಉಂಟುಮಾಡುವುದು ಮತ್ತು ಕಾರ್ಯನೀತಿ ಹಸ್ತಕ್ಷೇಪಗಳನ್ನು
                    ಕಟ್ಟುವುದು.
 
 ತಾರ್ತಿಕ ಕಾರಣಗಳಿಂದ, NTM ಸಂವಿಧಾನ 8ನೇ ಪರಿಚ್ಛೇದದಲ್ಲಿ ಸೂಚಿಸಿರುವ 22 ಮುಖ್ಯ ಭಾಷೆಗಳಲ್ಲಿ ಕಾರ್ಯಾರಂಭ
                    ಮಾಡುವುದು ಅಧಿಕೃತವಾಗಿದೆ, ಆದರೆ, ಇದರ ಉತ್ಪಾದನೆಯನ್ನು ಪ್ರಾಂತೀಯ ಭಾಷೆಗಳಲ್ಲಿ ನಿರ್ವಹಿಸುವುದು
                    ಮತ್ತು ಪ್ರಸರಣ ಮಾಡುವುದನ್ನು ಮರೆಯುವಂತಿಲ್ಲ.
 
 ಈ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ NTM ಅನ್ನು 11ನೇ ಯೋಜನಾವಧಿಯಲ್ಲಿ ಆರಂಭಿಸಲು ರೂಪಿಸಲಾಗಿದೆ.
                    ಹಾಗೂ ಸಂಪೂರ್ಣ ಯೋಜನಾವಧಿಗೆ ರೂ. 250 ಕೋಟಿಗಳನ್ನು ಪ್ರಸ್ತಾಪಿಸಲಾಗಿದೆ (ರೂ. 80 ಕೋಟಿ ಸಾಂಸ್ಧಿಕ
                    ಖರ್ಚುಗಳಿಗಾಗಿ, ಮಾನವ ಸಂಪನ್ಮೂಲ ಮತ್ತು ವಿದ್ಯಾರ್ಥವೇತನಗಳಿಗೆ, ಮತ್ತು ಸುಮಾರು ರೂ.170 ಕೋಟಿ ಇನ್ನುಳಿದ
                    ಎಲ್ಲಾ ಚಟುವಟಿಕೆಗಳಿಗಾಗಿ, ಇದರಲ್ಲಿ ಇತರ ಸಂಸ್ಧೆಗಳ ಸಹಯೋಗಕ್ಕೆ ಹಣಕಾಸು ಪೂರೈಕೆಯನ್ನು ಸಹ ಸೇರಿಸಿಕೊಳ್ಳಲಾಗಿದೆ).
                    11ನೇ ಯೋಜನಾವಧಿಯಲ್ಲಿನ ಅನುಭವದ ಆಧಾರದ ಮೇಲೆ ಬೆಂಬಲವನ್ನು ತರುವಾಯ ವರ್ಧಿಸುವ ಕುರಿತು ನಿರ್ಧರಿಸಲಾಗುವುದು.
                    ಮೂಲಭೂತ ಸೌಕರ್ಯಭಿವೃದ್ಧಿಗೆ NTM ಗೆ ಬೆಂಬಲದ ಅಗತ್ಯತೆ ಕಾಣಬಹುದು.
 
 ಹಾಗೆಯೇ, NTMನ್ನು ಸೃಷ್ಟಿಸುವ ಹಾಗೂ ಅಭಿವೃದ್ಧಿಪಡಿಸುವ ಕಾರ್ಯವನ್ನು ಸಂಪನ್ಮೂಲ ಸಚಿವಾಲಯ (ಅದರಲ್ಲಿಯೂ
                    ಭಾಷಾ ಕಾರ್ಯಾಲಯ ಇದರಲ್ಲಿ NBT ಕಾರ್ಯನಿರ್ವಹಿಸುತ್ತಿದೆ), ಏಕೆಂದರೆ, ವಿಶ್ವವಿದ್ಯಾನಿಲಯಗಳು, IITಗಳು,
                    NBT ಮತ್ತು CIILನ್ನೂ ಒಳಗೊಂಡಂತೆ - ಇನ್ನಿತರ ಭಾಷಾ ಸಂಸ್ಧಾನಗಳು ಅದರಡಿಯಲ್ಲಿಯೇ ಬರುವುದರಿಂದ ಅಥವ
                    ಸಂಸ್ಕೃತಿ ಸಚಿವಾಲಯ (ಸಾಹಿತ್ಯ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ)ಕ್ಕೆ ವಹಿಸಬೇಕೋ, ಇಲ್ಲವೋ ಎಂಬುದನ್ನು
                    ನಿರ್ಧರಿಸಬೇಕಾಗಿದೆ.
 
 ಸರ್ಕಾರಕ್ಕೆ ಸಲ್ಲಿಸುವ ಮುನ್ನ ಈ ಪ್ರಸ್ತಾವನೆಯನ್ನು ಇನ್ನೂ ವಿಸ್ತಾರವಾಗಿ ವಿವರಿಸುವುದು ಮತ್ತು
                    ಅಭಿವೃಧ್ದಿ ಪಡಿಸುವುದರ ಕುರಿತು ಗಮನಾರ್ಹ ಚಿಂತನೆಯಾಗಬೇಕಿದೆ. ಸಂಬಂಧಪಟ್ಟ ಸಚಿವಾಲಯಗಳಲ್ಲಿ ಸಮಾಲೋಚನೆಗಳನ್ನು
                    (ಮಾನವ ಸಂಪನ್ಮೂಲ, ಸಂಸ್ಕೃತಿ ಇತ್ಯಾದಿ) ನಡೆಸುವುದರ ಜೊತೆಗೆ, 10 ಸದಸ್ಯರ ಒಂದು ಗುಂಪನ್ನು ಮಾಡಬೇಕಿದೆ.
 |  
            
                | 1. | ಪ್ರೋ. ಬಿಪಿನ್ ಚಂದ್ರ, ಮುಖ್ಯಸ್ತರು, NBT |  
                | 2. | ಪ್ರೋ. ಕೆ. ಸಚ್ಟಿದಾನಂದನ್, (ಕಾರ್ಯದರ್ಶಿ, ಸಾಹಿತ್ಯ ಅಕಾಡೆಮಿ) ಅಥವ ಡಾ. ನಿರ್ಮಲ್ ಕಂಠಿ ಭಟ್ಟಾಚಾರ್ಜಿ
                    (ಸಂಪಾದಕರು, ಇಂಡಿಯನ್ ಲಿಟರೇಚರ್ ಮತ್ತು ಸದಸ್ಯರು, ಸಾಹಿತ್ಯ ಅಕಾಡೆಮಿ) |  
                | 3. | ಪ್ರೋ. ಪ್ರಮೋದ್ ತಾಳ್ಗೇರಿ (ವಿಶ್ರಾಂತ ಕುಲಪತಿಗಳು, CIEFL, ಈಗ JNUನಲ್ಲಿ) ಅಥವ ಪ್ರೋ. ಅಲೋಕ್
                    ಭಲ್ಲಾ (CIEFL, ಹೈದ್ರಾಬಾದ್). |  
                | 4. | ಪ್ರೋ. ಇಂದ್ರಾನಾಥ್ ಚೌಧರಿ (ನಿವೃತ್ತ ಹಿಂದಿ ಪ್ರಾಚಾರ್ಯರು, ದೆಹಲಿ ವಿಶ್ವವಿದ್ಯಾನಿಲಯ, ನಿರ್ದೇಶಕರು,
                    ನೆಹರು ಕೇಂದ್ರ ಮತ್ತು ಕಾರ್ಯದರ್ಶಿ, ಸಾಹಿತ್ಯ ಅಕಾಡೆಮಿ). |  
                | 5. | ಪ್ರೋ. ಯು. ಆರ್. ಅನಂತಮೂರ್ತಿ (ನಿವೃತ್ತ ಅಧ್ಯಕ್ಷರು, ಸಾಹಿತ್ಯ ಅಕಾಡೆಮಿ ಮತ್ತು ಕುಲಪತಿಗಳು -
                    ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯ) ಅಥವ ಗಿರೀಶ್ ಕಾರ್ನಾಡ್ (ನಿವೃತ್ತ ನಿರ್ದೇಶಕರು, ನೆಹರು ಕೇಂದ್ರ) |  
                | 6. | ಪ್ರೋ. ಅಮಿಯಾ ದೇವ್ ಅಥವ ಪ್ರೋ. ನಬನೀತಾದೇವ್ ಸೆನ್ (ಇಬ್ಬರೂ ತೌಲನಿಕ ಸಾಹಿತ್ಯದ ನಿವೃತ್ತ ಪ್ರಾಚಾರ್ಯರು,
                    ಜಾದವಪುರ ವಿಶ್ವವಿದ್ಯಾನಿಲಯ) |  
                | 7. | ಪ್ರೋ. ಎಸ್. ಬಿ. ವರ್ಮ (ಜಪಾನೀಸ್ನ ನಿವೃತ್ತ ಪ್ರಾಚಾರ್ಯರು, JNU ಮತ್ತು ಸುಪ್ರಸಿದ್ಧ ಅನುವಾದಕರು). |  
                | 8. | ಪ್ರೋ. ಹರೀಶ್ ತ್ರಿವೇದಿ, ಆಂಗ್ಲ ವಿಭಾಗ, ದೆಹಲಿ ವಿಶ್ವವಿದ್ಯಾನಿಲಯ. |  
                | 9. | ಪ್ರೋ. ಪುಷ್ಪಕ್ ಭಟ್ಟಾಚಾರ್ಯ ( IITಮುಂಬೈ) |  
                | 10. | ಪ್ರೋ. ಉದಯ ನಾರಾಯಣ ಸಿಂಹ (ನಿರ್ದೇಶಕರು, ಭಾರತೀಯ ಭಾಷಾ ಸಂಸ್ಧಾನ, ಮೈಸೂರು) |  
                |  |  
        
            |     |  |  |